ನಿಮ್ಮ ಆಹಾರವೇ ನಿಮ್ಮ ಹೊಸ ವೈದ್ಯ
ಇವುಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ
ಯಾವುದೇ ಧಾನ್ಯಗಳ ಸೇವನೆ. ಉದಾಹರಣೆಗೆ, ಅಕ್ಕಿ, ರಾಗಿ, ಜೋಳ,ಗೋಧಿ ಇತ್ಯಾದಿ
ಧಾನ್ಯ, ಉಪ್ಪು, ಎಣ್ಣೆಗಳ ಅತಿ ಕಡಿಮೆ ಬಳಕೆ
ಬೇಯಿಸಿದ ಆಹಾರ ಸೇವನೆಯ ಪ್ರಮಾಣ
ಮೊಬೈಲ್, ಟಿವಿ, ಕಂಪ್ಯೂಟರ್ ವೀಕ್ಷಣೆ
ಫ್ಯಾನ್ ಮತ್ತು ಹವಾನಿಯಂತ್ರಕಗಳ (ಏ .ಸಿ ) ಬಳಕೆ
ನಿಮಗೆ ತಿಳಿದಿರುವಂತಹ ಯಾವುದೇ ಕೆಟ್ಟ ಅಭ್ಯಾಸ
ನಿಮಗೆ ಚಟವಿರುವಂತಹ ಯಾವುದೇ ಕೆಟ್ಟ ಅಭ್ಯಾಸ
ನಿಮ್ಮನ್ನು ಕುಂಠಿತಗೊಳಿಸುವಂತಹ ಭಾವನೆಗಳು ಹಾಗೂ ಸನ್ನಿವೇಶಗಳು
ಅವಿರತ ಕೆಲಸ
ಕೆಲಸ ರಹಿತ ವಿಶ್ರಾಂತಿ
ಉದಾಸೀನತೆ ಮತ್ತು ಹಗಲಿನಲ್ಲಿ ನಿದ್ರಿಸುವಿಕೆ
ಗುರಿರಹಿತ ಜೀವನ
ಇವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ
30ರಿಂದ 60 ನಿಮಿಷಗಳ ಕಾಲ ಸೂರ್ಯ ಸ್ನಾನ ( ಎಳೆ ಬಿಸಿಲಿಗೆ ಮೈಯೊಡ್ಡುವುದು)
ಕೆಲಸ ಮಾಡುವಾಗ, ನಿದ್ರಿಸುವಾಗ ಹಾಗೂ ಎಲ್ಲ ಸಮಯದಲ್ಲಿ ಶುದ್ಧ ಗಾಳಿಯ ಸೇವನೆ
ಪ್ರತಿದಿನ 30 ನಿಮಿಷಗಳ ವ್ಯಾಯಾಮ. ಸಾಧ್ಯವಾದರೆ ದಿನಕ್ಕೆ ಎರಡು ಬಾರಿ.
ಬೇಗ ಮಲಗಿ. ರಾತ್ರಿ 9 ಗಂಟೆಯ ಮೊದಲು ಮಲಗಿದರೆ ಒಳ್ಳೆಯದು.
ಬೆಳಗ್ಗೆ 5 ರಿಂದ - 6ಗಂಟೆಯ ಮೊದಲು ಏಳಿ .
ಪ್ರತಿಬಾರಿ ಮೂತ್ರ ಅಥವಾ ಮಲ ವಿಸರ್ಜನೆ ಮಾಡಿದ ನಂತರ ವಿಸರ್ಜಿಸಿದ ನೀರಿನ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ
ಪ್ರತಿ ಕ್ಷಣವನ್ನು ಆನಂದಿಸಿ ಹಾಗೂ ವಿಶ್ರಾಂತರಾಗಿರಿ. ಇದು ನಿಮ್ಮ ಆಯ್ಕೆ
ದಿನಕ್ಕೆ ಎರಡು ಬಾರಿಯಾದರೂ ಪ್ರಾರ್ಥಿಸಿ
ವಾರದಲ್ಲಿ ಒಂದು ದಿನ ಕೇವಲ ಹಣ್ಣುಗಳನ್ನೇ ಆಹಾರವಾಗಿ ಸೇವಿಸಿ
ವರ್ಷದಲ್ಲಿ ಒಂದುಬಾರಿ 3 - 4 ವಾರಗಳ ಕಾಲ ಕೇವಲ ಹಣ್ಣುಗಳನ್ನೇ ಸೇವಿಸಿ
ಎಲ್ಲದರಲ್ಲೂ ಮಿತಿಯಿರಲಿ
ಇವುಗಳನ್ನು ಸಂಪೂರ್ಣವಾಗಿ ನಿಲ್ಲಿಸಿ
ಹಾಲು ಹಾಗೂ ಹಾಲಿನ ಉತ್ಪನ್ನಗಳು
ಎಲ್ಲಾ ರೀತಿಯ ಮೊಟ್ಟೆಗಳು
ಎಲ್ಲಾ ರೀತಿಯ ಮಾಂಸ/ ಮೀನು
ಸಕ್ಕರೆ, ಸಂಸ್ಕರಿಸಿದ ಎಣ್ಣೆ, ಮೈದಾ, ಗೋಧಿ, ಬಾರ್ಲಿ, ಓಟ್ಸ್, ಸಣ್ಣ ಗೋಧಿ (ರೈ )
ಯಾವುದೇ ರೀತಿಯ ಧಾನ್ಯ ಅಥವಾ ಕಾಳುಗಳನ್ನು ರುಬ್ಬಿ ಅಥವಾ ಅವುಗಳ ಹಿಟ್ಟಿನಿಂದ ಮಾಡಿದ ತಿನಿಸುಗಳು . ಉದಾಹರಣೆಗೆ , ಇಡ್ಲಿ , ದೋಸೆ , ಪೂರಿ, ಅಪ್ಪಂ, ಚಪಾತಿ, ಪರೋಟ, ಪುಟ್ಟು, ಬಜ್ಜಿ, ಬೋಂಡಾ, ಪಕೋಡ, ವಡೆ ಇತ್ಯಾದಿ.
ಬೇಳೆ/ ಕಾಳು, ಸೋಯಾ
ಟೀ, ಕಾಫಿ ಹಾಗೂ, ನವಜಾತ ಶಿಶುಗಳಿಗಾಗಿ, ಮಕ್ಕಳಿಗಾಗಿ, ವಯಸ್ಕರಿಗಾಗಿ, ಗರ್ಭಿಣಿಯರಿಗಾಗಿ, ಹಾಲುಣಿಸುವ ತಾಯಂದಿರಿಗಾಗಿ, ವೃದ್ಧರಿಗಾಗಿ ಮಾರುಕಟ್ಟೆಯಲ್ಲಿ ದೊರೆಯುವ ಕೃತಕ, ಸಂಸ್ಕರಿಸಿದ ಆರೋಗ್ಯವರ್ಧಕ ಪಾನೀಯಗಳು ಹಾಗೂ ಉತ್ಪನ್ನಗಳು ಇತ್ಯಾದಿ
ಯಾವುದೇ ರೀತಿಯ ಬೇಕರಿ ಉತ್ಪನ್ನಗಳು, ಸಿಹಿ ತಿನಿಸುಗಳು, ಎಣ್ಣೆಯಲ್ಲಿ ಕರಿದ ತಿಂಡಿಗಳು,ಕೇಕ್ , ಬಿಸ್ಕಿಟ್, ಬರ್ಗರ್, ಸ್ಯಾಂಡ್ವಿಚ್, ಪಿಜ್ಜಾ, ಯಾವುದೇ ರೀತಿಯ ಬ್ರೆಡ್ ಗಳು ಇತ್ಯಾದಿ.
ಚಾಕಲೇಟ್, ಐಸ್ಕ್ರೀಂ, ಕೃತಕ ತಂಪು ಪಾನೀಯಗಳು.
ಕಾರ್ಖಾನೆಗಳಲ್ಲಿ ಮಾಡಿದ/ ಸಂಸ್ಕರಿಸಿದ ಹಣ್ಣಿನ ರಸ ಹಾಗೂ ಇತರ ಉತ್ಪನ್ನಗಳು.
ಕೃತಕ ಬಣ್ಣ, ಕೃತಕ ರುಚಿ ಹಾಗೂ ಸಂರಕ್ಷಕಗಳನ್ನು ಹಾಕಿರುವಂತಹ ಯಾವುದೇ ರೀತಿಯ ಆಹಾರ ಉತ್ಪನ್ನಗಳು
ತಂಬಾಕು, ಮದ್ಯಪಾನ, ಉತ್ತೇಜಕಗಳು, ಮಾದಕ ವಸ್ತುಗಳು, ಮತ್ತು ಯಾವುದೇ ರೀತಿಯ ವ್ಯಸನಕ್ಕೀಡು ಮಾಡುವಂತಹ ವಸ್ತುಗಳು.
ಹಸಿವಿಲ್ಲದಾಗ ಊಟ ಮಾಡುವುದು
ದಿನದಲ್ಲಿ ಪದೇ ಪದೇ ತಿನ್ನುವುದು
ಅತಿಯಾದ ಆಹಾರ ಸೇವನೆ
ವಿವಿಧ ಬಗೆಯ ಬೇಯಿಸಿದ ಆಹಾರಗಳು
ವೇಗವಾಗಿ ತಿನ್ನುವುದು
ಹೊಟ್ಟೆ ತುಂಬುವವರೆಗೆ ತಿನ್ನುವುದು
ಊಟ ಮಾಡಿದ ತಕ್ಷಣ ನಿದ್ರಿಸುವುದು. ರಾತ್ರಿ ಕಡಿಮೆ ತಿಂದರೂ ಕೂಡ , ಅದು ಮಲಗುವ ೨ ಗಂಟೆ ಮೊದಲೇ ಮುಗಿದಿರಬೇಕು.
ಊಟ ಮಾಡುವಾಗ ಅತಿಯಾಗಿ ನೀರು ಕುಡಿಯುವುದು.
ಯಾವುದೇ ರೀತಿಯ ರಾಸಾಯನಿಕ ವಸ್ತುಗಳನ್ನು ಬಳಸುವುದು, ಉದಾಹರಣೆಗೆ, ಸಾಬೂನು, ಶಾಂಪೂ, ಹಲ್ಲುಜ್ಜುವ ಪೇಸ್ಟ್, ಸುಗಂಧ ದ್ರವ್ಯ, ಟಾಲ್ಕಮ್ ಪೌಡರ್ ಇತ್ಯಾದಿ.
ಎಲ್ಲಾ ರೀತಿಯ ಸೌಂದರ್ಯ ವರ್ಧಕಗಳು.
ಹವಾ ನಿಯಂತ್ರಕ ಯಂತ್ರ(ಎ .ಸಿ) ಬಳಕೆ
ಸೊಳ್ಳೆ ನಿಯಂತ್ರಿಸುವ ಬತ್ತಿಗಳು ಮತ್ತು ದ್ರಾವಣಗಳು
ಇವುಗಳ ಸೇವನೆಯನ್ನು ಪ್ರಾರಂಭಿಸಿ
ರಸಭರಿತ, ನಾರುಯುಕ್ತ, ಸಿಹಿ ಮತ್ತು ಹುಳಿ ಮಿಶ್ರಿತ ಹಣ್ಣುಗಳು
ತಾಜಾ ಹಣ್ಣುಗಳ ರಸ
ಬೆಳಗ್ಗೆ ಸೊಪ್ಪುಗಳ ರಸಸೇವನೆ
ನಿಂಬೆ ಹಣ್ಣಿನ ರಸ ದಿನಕ್ಕೆ ಒಂದು ಬಾರಿ
ಬೇಯಿಸಿದ ಸೊಪ್ಪು ಮತ್ತು ತರಕಾರಿಗಳು
ಅತಿ ಕಡಿಮೆ ಪ್ರಮಾಣದಲ್ಲಿ ಬೇಯಿಸಿದ ಧಾನ್ಯಗಳು, ಧಾನ್ಯಗಳ ಜೊತೆಗೆ ಸರಳವಾದ ತರಕಾರಿ ಪಲ್ಯ
ಸ್ಥಳೀಯವಾಗಿ ಬೆಳೆದ ಹಾಗೂ ಋತುವಿಗೆ ತಕ್ಕ ಆಹಾರ ಪದಾರ್ಥಗಳು
ಕಡಿಮೆ ಸಂಸ್ಕರಿಸಿದ, ಕನಿಷ್ಠ ಬೆಂಕಿಯಿಂದ ಮಾಡಿದ ಅಡುಗೆ
ತಾಜಾ ನೀರು, ಶುದ್ಧ ಜೇನುತುಪ್ಪ